ಅಕ್ಷಯಾಮೃತಧಾರೆ
ಸುಜ್ಞಾನದೀವಿಗೆ ಶ್ರೀ ಗುರು ತಿಪ್ಪೇರುದ್ರೇಶ.

ಭಕ್ತಿಗೆ ಒಲಿವಾತನೇ ಶ್ರೀ ಗುರು ತಿಪ್ಪೇರುದ್ರೇಶ, ವಿಶ್ವವಂದ್ಯನ ಕುರಿತು ಅಂತ್ಯವಿರದಷ್ಟು ಸಾಹಿತ್ಯ ಕೃಷಿ ಇರಬೇಕೆಂಬ ಬಯಕೆ. ಆ ಕಾರಣದಿಂದ ಈ ಯೋಜನೆ ರೂಪ ತಾಳಿರುತ್ತದೆ.
ತಿಪ್ಪೇಶ ನಿನ್ನ ಮಹಿಮೆ ಅಪಾರ,
ಸತ್ತೆಮ್ಮೆಯನ್ನೇ ಬಡಿದೆಬ್ಬಿಸಿದ ಮಹಾನುಭಾವನಯ್ಯಾ ನೀನು..
ನಿನ್ನ ಮನಸ್ಸು ಮಲ್ಲಿಗೆಯಂತೆ.....
ನೀನೇ ನನಗೆ ಆಧಾರ....
ಕಷ್ಟ ಎಂದರೆ ಕರಗುವ ಮನಸ್ಸು ನಿನ್ನದಲ್ಲವೇ.....
ನನ್ನನ್ನು ಅಂಗೈಲಿಟ್ಟು ಜೋಪಾನ ಮಾಡುವವ ನೀನಲ್ಲವೇನಯ್ಯಾ....
ತಿಪ್ಪಯ್ಯ ಜಗತ್ತಿನ ಅತ್ಯಂತ ಅಮೂಲ್ಯವಸ್ತು ಬೇರಿಲ್ಲ ಜಗದೊಳಗೆ....
ನೀನೆ ನನಗೆ ಆದಿ.... ನಿನ್ನ ನಾಮವೇ ಮಧ್ಯ.... ನಿನ್ನ ಮರೆವುದೇ ಎನಗೆ ಅಂತ್ಯ ಕಂಡಯ್ಯ..
ನಿನ್ನ ಮಗು ನಾನು...
ಕರುಣಿಸುವ ಕಾಮಧೇನು ನೀನು...
ನನ್ನದೇನಿಲ್ಲ , ಎಲ್ಲವೂ ನಿನ್ನದೆ...
ರಕ್ಷಿಸುವ ಹೊಣೆ ನಿನ್ನದು...
ನಾನು ಎಂಬ ಅಹಂಕಾರವು ಶೂನ್ಯವಾಯಿತು...
ನಿನ್ನ ಪಾದ ಸ್ಪರ್ಶವೂಂದೇ ಪಾವನವಯ್ಯ...
ಕರುಣಿಸು ಕರುಣಾಸಾಗರ....
ಎರಡಕ್ಷರ ಬರೆಯಬೇಕೆಂದಿದ್ದೆ..
ಗುರವಿನ ಚಿತ್ತವೇ ಸಾಲುಗಳು ಉರುಳಿದರೂ ಆಸೆ ತೀರುತಿಲ್ಲ ನಿನ್ನ ಹೊಗಳಲು...
ಹಾಡಿದರೆ ಹಾಡು ಸಾಲದು,
ಓದಿದರೆ ನಿನ್ನ ಚರಿತೆ ಮುಗಿಯದು,
ನೆನೆದರೆ ಆ ನೆನಹೂ ಸಾಲದು,
ಹೊಗಳಿದರೆ ಆ ಹೊಗಳಿಕೆಯಿಂದ ಆಸೆ ತೀರದು,
ಹೇ ಜಗದೊಡೆಯ , ಜಲಜಂಗಮ ನೀನು ಎಷ್ಟು ಶಕ್ತಿ ಕೊಟ್ಟಿರುವೆಯೋ ಅದಕ್ಕೂ ಹೆಚ್ಚೇ ನಿನ್ನ ಮಹಿಮೆ ಲೋಕ ಪ್ರಸಿದ್ದಿ ಮಾಡುವೆ....
ನೀನು ಅಂಗದ ಮೇಲಿನ ಲಿಂಗವಿದ್ದಂತೆ ಎನಗೆ,
ದೇಹದೊಳಗಿನ ಜೀವವಿದ್ದಂತೆ,
ಜೇನಿನೊಳಗಿನ ಸಿಹಿ ಇದ್ದಂತೆ,
ಹಣ್ಣಿನೊಳಗಿನ ಸವಿ ಇದ್ದಂತೆ,
ಮರದಕೆಳಗಿನ ತಂಪು ಇದ್ದಂತೆ,
ಭ್ರಹ್ಮಾಂಡದೊಳಗಿನ ಜೀವ ಸಂಚಯನವಿದ್ದಂತೆ,
ಸೌರಮಂಡಲದೊಳಗಣ ಅರುಣನಿದ್ದಂತೆ,
ಎನ್ನ ಅಂಗ ನಾಶವಾದೀತು ಗುರುವೆ, ನಿನ್ನ ಮೇಲಿನ ಭಕ್ತಿ ಕ್ಷಯಿಸದು...
ನಿನ್ನ ಬಳಿ ಇಂದು ಕೇಳುತಿಹೆ...ನನ್ನ ಜೀವವೇ ನೀನು ನೀನಿಲ್ಲದಿರೇ ಬಾಳೇ ಶೂನ್ಯವಿದ್ದಂತೆ ರಕ್ಷಿಸು ಹೇ ತಿಪ್ಪೇಶ...
ನಿನ್ನ ಚರಣದಾಸನೀತ....
ನನ್ನ ಅನವರತ ಕಾಯ್ವ ಮಹಾಪುರುಷ ನೀನಯ್ಯ....
ಶರಣು ಶರಣಾರ್ಥಿ
ಸುಜ್ಞಾನದೀವಿಗೆ ಗುರು ತಿಪ್ಪೇರುದ್ರೇಶ.......
ದಿನಾಂಕ-29-11-2017
ಭಾಗ ೩
ಜ್ಞಾನದೀವಿಗೆ ಕ್ರಿಯೇಷನ್ಸ್ ವತಿಯಿಂದ ಪ್ರಕಟವಾಗಲಿರುವ ಆಂಡ್ರಾಂಡ್ ಅಪ್ಲಿಕೇಶನ್ ನಲ್ಲಿ ಕಂಡುಬರುವ ವಿಶೇಷ ಅಂಶಗಳ ದರ್ಶನ
ಶ್ರೀ ಗುರು ಕ್ಷೇತ್ರದ ಪುಟದಲ್ಲಿ...
ಎಲ್ಲರೂ ಆತ್ಮೀಯವಾಗಿ ಬರಮಾಡಿಕೊಳ್ಳಿ ಗುರುಗಳ ಕಥಾಸಾರವನು...
ಕರುಣೆಯ ಸಾಗರ ನೀನಯ್ಯ...
ನಮ್ಮನು ಹರಸು ತಿಪ್ಪಯ್ಯ...
ಜ್ಞಾನದ ದೀವಿಗೆ ನೀನಯ್ಯ...
ನಮ್ಮನು ಹರಸು ಜಗದಯ್ಯ...
ಮಹಾ ಮಹಿಮನು ನೀನಯ್ಯ
ನಮ್ಮನು ಹರಸು ಮಹನೀಯ...
ವಿಶ್ವವಂದ್ಯನು ನೀನಯ್ಯ
ನಮ್ಮನು ಹರಸು ರುದ್ರಯ್ಯ
ಬಿಲ್ವ ಪ್ರಿಯನು ನೀನಯ್ಯ
ನಮ್ಮನು ಹರಸು ದೇವಯ್ಯ..
ಭಸ್ಮಪ್ರಿಯನೆ, ಸತ್ ಚಿತ್ ಆನಂದ ದಾಯಕ, ಪರಶಿವ ಸ್ವರೂಪ, ಗಗನಂತರ್ಯಾಮಿ, ತ್ರಿಲೋಕ ಪ್ರಕಾಶ, ವಿಶ್ವಂಭರ, ದಾರಿದ್ರ್ಯ ನಾಶಕ, ವಿಘ್ನೇಶ, ವಿಶ್ವೇಶ, ಸರ್ವೇಶ, ಜಗದೀಶ, ಮಹಾನುಭಾವ, ಮಹಾಮಹಿಮ, ರಕ್ಷಕ,ಅಭಯದಾಯಕ, ಗುಣಸಾಗರ, ಗುರಿ ದರ್ಶಕ, ವಿಶ್ವಸ್ವರೂಪ, ಲೋಕಪ್ರಸಿದ್ಧಿ, ಜಂಗಮ, ಕಾಲ, ಕಾರ್ಯ, ಭಕ್ತಿ, ಭಾವ, ಕಾಯಕ, ದಾಸೋಹ, ಧಾನ್ಯ, ಧರ್ಶನ, ನೇತ್ರ, ಭಸ್ಮ, ರೋಮ, ಸುಗಂಧ, ಸ್ಪರ್ಶ, ಶಬ್ಧ, ನೋಟ, ರುಚಿ, ಔತಣ, ಗುಣ, ಶರೀರ, ಶಕ್ತ, ಭಕ್ತ, ಮಹಾ ಮಹಾ ಮಹಾ ಸುಜ್ಞಾನವಂತ ಜ್ಞಾನದಾಯಕ ಸುಜ್ಞಾನದೀವಿಗೆ ಶ್ರೀಗುರು ತಿಪ್ಪೇರುದ್ರಸ್ವಾಮಿಗಳಲ್ಲಿ ಎನ್ನ ಶಿರವನರ್ಪಿಸಿ ನಮಿಪೆ.....
ಜಯವೆಂದು ನುಡಿಯಿರಿ ಗುರುದೇವನ...
ಮುತ್ತಿನಂತ ದೇವಗೆ ಮುತ್ತಿನಾರತಿ ಬೆಳಗಿರಿ....
ಚಿನ್ನದಂತ ದೇವಗೆ ಹೂಗಳನ್ನರ್ಪಿಸಿ....
ದೇವಾದಿ ದೇವಾಯ ಮಹಾದೇವಾಯ ಶಿವಾಯ ಶರ್ವಾಯ ಮಂಗಳಂ...
ಓಂ ಶಾಂತಿ ಶಾಂತಿ ಶಾಂತಿಃ
ಶರಣು ಶರಣಾರ್ಥಿ...
ಸುಜ್ಞಾನದೀವಿಗೆ ಶ್ರೀ ಗುರು ತಿಪ್ಪೇರುದ್ರೇಶ
ದಿನಾಂಕ-30-11-2017
ಭಾಗ ೪
ಚರಾಚರ ಮಹಾಚರ ಚಿರ ಸೌಖ್ಯದಾತ...
ಮಹಾಜ್ಞಾನದಾತ, ವಿಶ್ವಸೌಖ್ಯದಾತ,
ಅನ್ನದಾತ, ಶಾಂತಿದಾತ,
ನೆಮ್ಮದಿ ನೀಡುವ ನಿರಾಕಾರ ,
ನಿರ್ಗುಣ,
ಅನಿಯಮಿತ, ಆದಿ, ಅಂತ್ಯರಹಿತ,
ಆಕರ್ಷಕ, ಜೀವ ರಕ್ಷಕ,
ಅಭಯದಾಯಕ, ಆಪ್ತರಕ್ಷಕ,
ಆಪ್ತಮಿತ್ರ, ಆಘಾತ ನಿವಾರಕ,
ಭಯ ನಿವಾರಕ, ಶೋಕ ನಾಶಕ,
ಅಭಯದಾಯಕ, ವಿಕ್ರಮ, ತ್ರಿವಿಕ್ರಮ,
ಕಮಂಡಲ ಹಿಡಿದವ, ಡೊಂಕುಬೆತ್ತದಿ ಜಗವಾಳುವವ, ಅಪರಂಚಿ, ಚಿನ್ನ, ಚಿನ್ಮಯಸ್ವರೂಪ, ತ್ವರಿತ,
ತಾರತಮ್ಯನಾಶಕ, ತಂತ್ರಜ್ಞಾನದೊಡೆಯ
ಮಹಾಮಹಿಮನೆ ನೋಡು ನಿಮ್ಮ ಮಕ್ಕಳು ಜಗದಗಲ ವ್ಯಾಪಿಸಿಹರು ಅವರ ಮನದ ನೋವನ್ನಾಲಿಸು ಬಾ.....
ಧರೆಗಿಳಿದು ಬಾ.....
ಈ ಧರೆಯ ಪಾವನ ಮಾಡಲು ಬಾ....
ನೀನೇ ನಮಗೆಲ್ಲಾ ನಿನ್ನ ಹೊರತೇನಿಲ್ಲ.....
ವಿಶ್ವಕ್ಕೆ ನೀನೇ ಆಸ್ಥಿ....
ನೀನೇ ನನಗೆ ಅಸ್ಥಿ...
ದೇಹಕ್ಕೆ ಅಸ್ಥಿ ಆಧಾರದಂತೆ ನಿನ್ನ ಆಧಾರವೇ ನನಗೆ ಮಹೋಪಯೋಗ...
ಹೇ ದಾರಿದ್ರ್ಯನಾಶಕ...ನಮ್ಮ ಮೊರೆಯನ್ನಾಲಿಸು...ನಮ್ಮನ್ನು ಪಾಲಿಸು....ನಮ್ಮೂಡೆಯ.....
ಕರುಣಿಸು...ಕರುಣಾಸಾಗರ...
ಜ್ಞಾನದೀವಿಗೆ ಕ್ರಿಯೇಷನ್ ನಿಂದ ಹೊರಹೊಮ್ಮಲಿರುವ ಶ್ರೀಗುರುಗಳ ಅಪ್ಲಿಕೇಶನ್ ನಲ್ಲಿನ ಮುಖ್ಯ ಅಂಶಗಳ ದರ್ಶನ..ಶ್ರೀಗುರುಗಳ ಪುಟದಲ್ಲಿ..
ಎಲ್ಲಾ ಶ್ರೀಗುರುಗಳ ಭಕ್ತವೃಂದಕ್ಕೆ ತಲುಪಿಸುವ ಹೊಣೆ ಶ್ರೀಗಳ ಭಕ್ತವೃಂದಕ್ಕೇ ಅರ್ಪಣೆ.
ಶರಣು ಶರಣಾರ್ಥಿ
ಸುಜ್ಞಾನದೀವಿಗೆ ಶ್ರೀ ಗುರು ತಿಪ್ಪೇರುದ್ರೇಶ..🙏
ದಿನಾಂಕ ೧/12/2017
ಸರ್ವರಿಗೂ ಹನುಮಜಯಂತಿಯ ಶುಭಾಷಯಗಳು
ಭಾಗ ೫
ವೀರಭದ್ರನ ಶಿಷ್ಯನಾದಕಾರಣ ವೀರಾಂಜನೇಯ ಎಂದು ಪ್ರಸಿದ್ಧಿಯಾದ
ತಿಪ್ಪೇರುದ್ರಸ್ವಾಮಿಗಳಿಂದ ಮರುಲಿಂಗಧಾರಣೆ ಪಡೆದ ಮಹಾಗುಣವಂತ ಹನುಮಂತ ಶ್ರೀಪಂಚಗಣಾಧೀಶ್ವರರು ನೆಲೆಸಿದ ಸ್ಥಳಗಳಲ್ಲಿ ಹನುಮಂತನೂ ನೆಲೆಸುವುದಾಗಿ ಹೇಳುತ್ತಾನೆ...ಈ ರೋಚಕ ಕಥೆಯನ್ನು *ಸುಜ್ಞಾನದೀವಿಗೆ_ಶ್ರೀಗುರು_ತಿಪ್ಪೇರುದ್ರೇಶ ಕೃತಿಯಲ್ಲಿ*
ಕಾಣಬಹುದು ..
ಮುಂದೆ ಹನುಮಂತನ ಗುಣಗಾನ
ಪರಾಕ್ರಮಿ
ವೀರಬಾಹು
ಜ್ಞಾನವಂತ
ಗುಣವಂತ
ಶಾಶ್ವತ
ಮಹಾಭಕ್ತ
ರಾಮಪ್ರಿಯ
ಶಿವನಂಶ
ರೋಮಕ್ಕೂಂದು ಕೋಟಿ ಲಿಂಗ ತೋರಿಸಿದ ಲಿಂಗ ಸ್ವರೂಪಿ
ವಿಶ್ವ ವಿಖ್ಯಾತ
ಸರ್ವವ್ಯಾಪಿ
ಸರ್ವಶ್ರೇಷ್ಠ
ಸರ್ವಪಾಪ ನಾಶಕ
ಬಲವಂತ
ಯುಕ್ತಿವಂತ
ಛಲವಂತ
ಸುಂದರ
ಬಾಲ ಲೀಲೆ ಮೆರೆದವ
ಚಾಣಾಕ್ಷ
ಚಾತುರ್ಯ
ಸುಮಧುರ
ಸನ್ಯಾಸಿ
ಬ್ರಹ್ಮಚಾರಿ
ಬ್ರಹ್ಮಗ್ನ
ಬ್ರಹ್ಮೋತ್ತಮ
ವಿಷ್ಣುಪ್ರಿಯ
ವಿಶ್ವಂಭರ
ವಿಶ್ವನಾಥಪ್ರಿಯ
ಲೋಕದೊಡೆಯ
ಮಹಾರತ್ನ
ಜ್ಞಾನರತ್ನ
ತ್ರಿಲೋಕ ಪ್ರಕಾಶ
ಮಹಾಜಯ
ಮಹಾಮೃತ್ಯುಂಜಯ
ಕಲಿ ತಾಪ ನಿವಾರಕ
ನಮೋ ನಮಃ
ವೀರಾಂಜನೇಯ ತಿಪ್ಪೇರುದ್ರನ ಪರಮಾಪ್ತ ಬಂಧುವೇ ನಿನಗೆ ಎನ್ನ ಶಿರಸಾಷ್ಟಾಂಗ ನಮನ....
ತೃಣಮಾತ್ರನ ಅನವರತ ಕಾಯುವ ಹೊಣೆ ನಿನ್ನದಿರಲಿ....
ಭಕ್ತರ ಭಕ್ತಿಗೆ ಒಲಿವ ನಿನ್ನಯ ಮನಸ್ಸು ಬೆಣ್ಣೆಯ ತೆರದಿ...
ಶರಣು ಶರಣೆಂಬೆ
ಸುಜ್ಞಾನದೀವಿಗೆ ಶ್ರೀ ಗುರು ತಿಪ್ಪೇರುದ್ರೇಶ...
ದಿನಾಂಕ-3-12-2017
ಭಾಗ ೬
ಮಹಾ ಮಹಿಮೆಯುಳ್ಳ ದಾರಿದ್ರ್ಯ ನಾಶಕ ಗುರು ಜ್ಞಾನದೀವಿಗೆ ತಿಪ್ಪೇರುದ್ರೇಶ ಗುರುವಿನ ಸ್ಮರಣೆ ಭಾಗ ೬....
ಅರಿಷಡ್ವರ್ಗವ ಮೆಟ್ಟಿನಿಂತ ಮಹಾತ್ಮ ನಮ್ಮ ತಿಪ್ಪಯ್ಯನ ವಿಶ್ವರೂಪ ದರ್ಶನ ನಿಮ್ಮೆಲ್ಲರ ಪ್ರೀತಿ ಸುಜ್ಞಾನದೀವಿಗೆ ಶ್ರೀ ಗುರು ತಿಪ್ಪೇರುದ್ರೇಶ ಕೃತಿಯ ಮುಂದಿನ ಭಾಗದಲ್ಲಿ....
ತಿಪ್ಪೇರುದ್ರ,ಮಹಾದೇವ,ಶಕ್ತಿಸ್ವರೂಪ,ವಿಶ್ವಮಾನ್ಯ,ಗುರುದೇವ
ದೈತ ದುಃಖ ನಾಶಕ.ದೈತ ಕಂಟಕ ದೂರಕ,ದೈತ ಕಷ್ಟ ನಿಗ್ರಹ,ದೈತ್ಯ ದುರ್ಗುಣ ಶಮನಗೈವವ,ದೈತ್ಯ ರೋಗ ನಿವಾರಕ,ದೈತ್ಯ ಲೋಪ ಕ್ಷಯಿಸುವವ,ದೈತ್ಯ ಪಾಪ ಕಳೆವವ,ದೈತ್ಯ ಹಿಂಸೆ ನಿಯಂತ್ರಕ, ದೈತ್ಯ ಅಸುರಾಂಶ ನಾಶಕ, ದೈತ್ಯ ಕೋಪ ನಿಗ್ರಹ, ದೈತ್ಯ ವಿರೂಪ ಕಳೆವವ , ದೈತ್ಯ ರೋಗಾದಿ ಶಮನಗೈವವ ನಿನ್ನ ವೈಭವ ಎಂದೆಂದಿಗೂ......
ದೈತ್ಯ ಕಾಮ ನಿಯಂತ್ರಕ
ದೈತ್ಯ ಕ್ರೋಧ ನಿಯಂತ್ರಕ
ದೈತ್ಯ ಲೋಭ ನಿಯಂತ್ರಕ
ದೈತ್ಯ ಮೋಹ ನಿಯಂತ್ರಕ
ದೈತ್ಯ ಮಧ ನಿಯಂತ್ರಕ
ದೈತ್ಯ ಮತ್ಸರ ನಿಯಂತ್ರಕ
ದೈತ್ಯ ಕಾಮ ಕಳೆವವ
ದೈತ್ಯ ಕ್ರೋಧ ಕಳೆವವ
ದೈತ್ಯ ಲೋಭ ಕಳೆವವ
ದೈತ್ಯ ಮೋಹ ಕಳೆವವ
ದೈತ್ಯ ಮಧ ಕಳೆವವ
ದೈತ್ಯ ಮತ್ಸರ ಕಳೆವವ
ದೈತ್ಯ ಕಾಮ ನಿವಾರಕ
ದೈತ್ಯ ಕ್ರೋಧ ನಿವಾರಕ
ದೈತ್ಯ ಲೋಭ ನಿವಾರಕ
ದೈತ್ಯ ಮೋಹ ನಿವಾರಕ
ದೈತ್ಯ ಮಧ ನಿವಾರಕ
ದೈತ್ಯ ಮತ್ಸರ ನಿವಾರಕ
ದೈತ್ಯ ಕಾಮ ನಾಶಕ
ದೈತ್ಯ ಕ್ರೋಧ ನಾಶಕ
ದೈತ್ಯ ಲೋಭ ನಾಶಕ
ದೈತ್ಯ ಮೋಹ ನಾಶಕ
ದೈತ್ಯ ಮಧ ನಾಶಕ
ಧೈತ್ಯ ಮತ್ಸರ ನಾಶಕ
ನಮೋ ನಮಃ ಗುರುವರ್ಯ ನಿನ್ನ ನಾಮವೇ ಮಧುರ, ನಿನ್ನ ನಾಮವೇ ಸುಂದರ, ನಿನ್ನ ನಾಮವೇ ಸ್ಥಿರ ಚರಗಳಿಗಾಧಾರ....
ಕರುಣಿಸು ಕರುಣೆಯೊಡೆಯ....
ನಮ್ಮ ಮೊರೆಯಾಲಿಸು....
ಶರಣು ಶರಣಾರ್ಥಿ
ಸುಜ್ಞಾನದೀವಿಗೆ ಶ್ರೀಗುರು ತಿಪ್ಪೇರುದ್ರೇಶ....🙏
ಭಾಗ೭
ಅಂಧಕಾರದ ಜಗದೊಳಗೆ , ಜ್ಯೋತಿಯಾಗಿ ಬಂದೆಯಯ್ಯಾ.....
ಅದೆಂತೆಂದೊಡೆ...
ಕಾಣದ ಕತ್ತಲೂಳು,ಬೆಳಕು ಮೂಡಿದಂತೆ....
ಅರಿಯದ ಮನದೊಳು, ಜ್ಞಾನ ಹೊಮ್ಮಿದಂತೆ...
ಮೂರ್ಖನೂ ಜಾಣನಾದಂತೆ..
ಮೂಗನೂ ಮಾಚನಾಡಿದಂತೆ..
ಕಿವುಡನೂ ಮಾತನಾಲಿಸಿದಂತೆ ....
ಕುರುಡನೂ(ಅಂಧನೂ) ಸುಂದರ ಪರಿಸರವ ನೋಡಿದಂತೆ...
ಬಾಯ್ಬಿಟ್ಟ ಧರೆಗೆ, ನೀರೊದಗಿ ಬಂದಂತೆ..
ನೀರೊದಗಿಬಂದ ನೆಲವು, ಹಸಿರಾದಂತೆ...
ಹಸಿರಾಗಿ ನಿಂತ ನೆಲದಿ, ಫಲವು ದೊರೆಬಿಟ್ಟಂತೆ...
ಕಾಡಲ್ಲಿ ಮರೆಯಾದ ದಾರಿ ಮತ್ತೆ ದೊರೆತಂತೆ....
ಮರಳುಗಾಡಿನಲಿ ನೀರು ದೊರೆತಂತೆ...
ಸುಳಿಯಲ್ಲಿ ಸಿಲುಕಿ ಬದುಕಿ ಬಂದಂತೆ...
ವಿಷ ಪ್ರಾಷಣ ಮಾಡಿದವನೂ ಬದುಕುಳಿದಂತೆ...
ದಾರಿದ್ರ್ಯದಲ್ಲೂ ಸುಖವು ಬೆರೆತಂತೆ...
ನಷ್ಟದಲ್ಲೂ ಲಾಭವ ಪಡೆದಂತೆ...
ಕಷ್ಟವೆಂದರೆ ಕರಗುವ ದೈವವ ಮಾತನಾಡಿಸಿದಂತೆ....
ಆದೈವವೇ ಸುಜ್ಞಾನದೀವಿಗೆಯಂತೆ...ನಮ್ಮ ತಿಪ್ಪೇರುದ್ರನಂತೆ...
ಇವನ ಮಹಿಮೆ ಎಷ್ಟು ವರ್ಣಿಸಿದರೂ ಸಾಲದು...
ಮುತ್ತಿನಹಾರ ಇವನು...
ಸುಂದರ ಚಲುವಾಂತ ಚೆನ್ನಿಗನಿವನು...
ಭಕ್ತಿಯ ಭಿಕ್ಷೆ ಬೇಡುವ ನೀತ,
ಕಂದನ ಕಷ್ಟವ ನೀಗುವ ನೀತ..
ಸುಂದರ ಸಮಧುರನು ನಾಡ ಸುತ್ತಿ ನುಡಿಯ ನುಡಿದು , ಭಾವ ಭಕ್ತಿಗೆ ಒಡೆಯನಾದ....
ಜಯ ಜಯವೆನ್ನಿ ಗುರುವರಗೆ,
ಸಾಂಬಸದಾಶಿವ ನಮ್ಮ ರಂಗಸಮುದ್ರದ ಈಶ,
ನಿಡುಗಲ್ಲಿನ ನಂಜೇಶ,
ನಾಯಕನಹಟ್ಟಿಯ ನಾದ ಬ್ರಹ್ಮ,
ಬಿಳಿನೀರ ಚಿಲುಮೆಯ ಜಠಾಧರ,
ಮಾರಮ್ಮನಹಳ್ಳಿಯ ಅಮೃತೇಶ,
ತಿಪ್ಪಯ್ಯನ ದುರ್ಗದ ದುರಿತ ನಿವಾರಕ
ಜಯ ಜಯ ನಿನ್ನ ನಾಮಕೆ
ಜಯ ಜಯ ನಿನ್ನ ಮಹಿಮೆಗೆ
ಜಯ ಜಯ ನಿನಗೆ
ಜಯ ಜಯ ಮಹಾ ಜಯ...
ಜಯತು ಜಯ ಮಹಾ ಜಯ...
ಶರಣು ಶರಣಾರ್ಥಿ
ಸುಜ್ಞಾನದೀವಿಗೆ ಶ್ರೀ ಗುರು ತಿಪ್ಪೇರುದ್ರೇಶ
*ಭಾಗ -೮*
*ಬೇಡಿ ಬಂದವರಿಗೆ ಬಾಗಿ ನೀಡು*
ಮನೆಯಲ್ಲಿ ಹಿರಿಯರು ಮಾತಿಗೊಮ್ಮೆ ಬಸವ ಬಸವ ಎನ್ನುತ್ತಿದ್ದರು. ಕಾರಣ ಬಸವನ ನಾಮ ದುರಿತ ದೂಡುವುದೆಂದು ಹಾಗೂ ಮನೆಯ ಸಕಲ ವೈಭೋಗಕ್ಕೂ ಕಾರಣ ಬಸವನೆಂದು. ಮತ್ತೂಂದು ಬದಿಯಲ್ಲಿ ಮನೆಯ ಎತ್ತುಗಳನ್ನೂ ಬಸವ ಎಂಬ ನಾಮವನ್ನಿರಿಸುತ್ತಿದ್ದರು ಕಾರಣ ಅವರ ಕಾಯಕಕೆ ಎತ್ತುಗಳೇ ಆಧಾರವೆಂದು. "ಕಾಯಕವೇ ಕೈಲಾಸ" ಎಂಬ ತತ್ವಕ್ಕನುಗುಣವಾಗಿ ತಮ್ಮ ಶಕ್ತಿಯೆಲ್ಲಾ ಹುರಿಮಾಡಿ ದುಡಿದು ಹಸಿವೆಂಬ ಹೆಮ್ಮಾರಿಯ ಅಟ್ಟಲು ಸಹಕಾರಿಯಾದವು ಎಂಬ ಮಹತ್ವಪೂರ್ಣ ಅಂಶವನ್ನು ಆಧರಿಸಿ ಬಸವನೆಂಬ ಹೆಸರಿರಿಸಿ ಗೌರವಿಸುತ್ತಿದ್ದರು.
ಶ್ರೀ ಗುರು ತಿಪ್ಪೇರುದ್ರೇಶನ ಕರುಣೆ ಎಂದಿಗೂ ಅಪಾರ. ಇವರನ್ನು ಆರಾಧಿಸಿ ಸ್ತುತಿಸುವ ಮನವು ಎಂದೂ ಬತ್ತದು. ಇವರನ್ನು ಆರಾಧಿಸುವ ಮನಕ್ಕೆ ಸಕಲವೂ ಶಿವಸ್ವರೂಪವೇ ಸರಿ. *ಬೇಡಿಬಂದವರಿಗೆ ಬಾಗಿ ನೀಡುವುದೇ ಗುರು ನೀಡಿದ ಸಂಸೃತಿ*.
ಇಂದಿಗೂ ನಮ್ಮ ಹಿರಿಯರ ಮಾತುಗಳನ್ನು ಒಮ್ಮೆ ಗಮನಿಸಿ ನೋಡಿ.....!!
ಮನೆಯಂಗಳಕ್ಕೆ ಬಂದವರನ್ನು ಬರೀ ಕೈ ನಲ್ಲಿ ಕಳುಹಿಸಿದ ಇತಿಹಾಸವಿದೆಯೇ ಯೋಚಿಸಿ ನೋಡಿ.....!!
ಸಾಧ್ಯವೇ ಇಲ್ಲ, ಕಾರಣ ಮನೆಯಲ್ಲಿ ಅವರ ಹಿರಿಯರು ಕಲಿಸಿದ ಸಂಸೃತಿ...
ನಾನು ಎಂಬ ಅಹಂಕಾರವೇ ಅರಿಯದ ಮನಸ್ಸುಗಳು ಅಂದಿನ ದಿನದ ಕುಟುಂಬದಲ್ಲಿರುತ್ತಿದ್ದವು. ಇಂದು ಎಲ್ಲೋ ಕೊಂಚ ಮರೆಯಾಗುತ್ತಿಲ್ಲವೇ....!!?, ಇದರ ಉತ್ತರವನ್ನು ನಿವೇ ಯೋಚಿಸಿ ನೋಡಿ, ಈ ಮುಂದಿನ ಉತ್ತರದ ಸಾಲುಗಳು ನಿಮದೇ,
ನಿಮ್ಮ ಮನವು ಹುಟ್ಟಿನಿಂದ ಮಲೀನವಲ್ಲ....
ನಿಮ್ಮ ಹುಟ್ಟು ಗುಣವೂ ಅಲ್ಲ...
ಅಂತಾದರೆ ಏಕೆ ಅಹಂಕಾರ ನಿಮಗೆ...
ಬರುವಾಗ ಏನನ್ನಾದರೂ ಹೊತ್ತು ತಂದಿದ್ದಿರಾ..!!.ನೀವು....
ಹೋಗುವಾಗ ಏನನ್ನಾದರೂ ಹೊತ್ತು ಹೋಗುತ್ತಿರಾ....!!
ಏನೂ ಇಲ್ಲವಲ್ಲ, ಒಂದು ಪಕ್ಷ ಹುಟ್ಟಿದಾಗ ಏನೂ ತರಲಿಲ್ಲವೆಂದರೂ ಹೋಗುವಾಗ ಸುಜ್ಞಾನದೀವಿಗೆ ಶ್ರೀ ಗುರು ತಿಪ್ಪೇರುದ್ರೇಶ ಕರುಣಿಸಿದ ಹಾರೈಕೆ ಅಂದರೆ ನಿಮ್ಮ ಒಳ್ಳೆಯ ಭಾವನೆ ಹಾದಿಯಿಂದ ಗಳಿಸಿದ ಹತ್ತಾರು ಜನರ ಒಳ್ಳೆಯ ಮಾತುಗಳು..
ಇದೇ ತಾನೇ ಎಲ್ಲದಕ್ಕೂ ಹಿರಿಮೆಯ ಶ್ರೇಷ್ಠತನವೆಂದರೆ..
ನೀವು ಏನೂ ತಂದಿಲ್ಲ ಎನ್ನುವುದಾದರೆ ಎಲ್ಲಾ ಇಲ್ಲಿಯೇ ದೊರೆತಿದ್ದಲ್ಲವೇ... ಇಲ್ಲಿ ದೊರೆತದ್ದು, ನಮ್ಮ ಅವಶ್ಯಕತೆಗೆ ಮೀರಿದ್ದು, ಇಟ್ಟುಕೊಂಡಾದರೂ ಪ್ರಯೋಜನವೇನು...? . ಅವಶ್ಯಕತೆ ಇರುವವರಿಗೆ ನೀಡುವುದು ಸರ್ವ ಶ್ರೇಷ್ಠ ಎಂದು ಪರಿಗೆಣಿಸಿ. ಬೇಡಿಬಂದವರನ್ನು ಶ್ರೀ ಗುರುವೆಂದು ತಿಳಿದು ಬಾಗಿ ನೀಡಿದಲ್ಲಿ ಗುರುವಿನೊಲುಮೆಯ ಸಾಕ್ಷಾತ್ಕಾರ ಖಂಡಿತವಾಗಿಯೂ ಲಭಿಸುತ್ತದೆ....
ಮರೆಯದಿರಿ ಇಂದಿನ ನುಡಿ ನಿಮ್ಮ ಮನ ಸೇರಲಿ ಎಂದು ಹೇಳುತ್ತಾ ೮ ನೇ ಅಧ್ಯಾಯಕ್ಕೆ ವಿರಾಮ ಹೇಳುವೆ...
*🙏ಶರಣು ಶರಣಾರ್ಥಿ🙏*
*ಸುಜ್ಞಾನದೀವಿಗೆ ಶ್ರೀ ಗುರು ತಿಪ್ಪೇರುದ್ರೇಶ*
ಇಂತಿ ನಿಮ್ಮವ ರುದ್ರೇಶ್ ಪಿ ವಿ
ಮುಂದುವರೆಯುವುದು.....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ