ಶುಕ್ರವಾರ, ಜನವರಿ 12, 2018

ನಾ ಕಂಡ ಮಂತ್ರಾಲಯ ದರ್ಶನ

                   ನಾ ಕಂಡ ಮಂತ್ರಾಲಯ ದರ್ಶನ

ಕೃಪೆ :- ಮಂತ್ರಾಯ ಕ್ಷೇತ್ರ

ಶ್ರೀ ಗುರು ರಾಘವೇಂದ್ರಸ್ವಾಮಿಯವರ ಹೆಸರಲ್ಲೇ ರಾಗ ಎಂಬಕ್ಷರದ ನರ್ತನವಿದೆ. ಶ್ರೀ ರಾಯರು ಭಕ್ತರ ಕಲ್ಪವೃಕ್ಷ , ಆರಾಧನೆ ಮಾಡುವವರ ಕಾಮಧೇನು. 

ಕಲ್ಪವೃಕ್ಷ ಎಂದರೆ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಸ್ಥಳವೆಲ್ಲಾ ವೃಕ್ಷದ ಅಂಶ ಇರುವುದೆಂಬುದಾಗಿದೆ. ಉದಾಹರಣೆ ತೆಂಗಿನ ಮರ ಯೋಚಿಸಿನೋಡಿ...

ತೆಂಗಿಲ್ಲದ ಪೂಜೆ ಇಲ್ಲ, ತೆಂಗಿಲ್ಲದ ಅಡುಗೆ ಇಲ್ಲ

ತೆಂಗಿಲ್ಲದೆ ತಲೆಗೆ ಎಣ್ಣೆ ಸಂಪೂರ್ಣವಾದೀತೇ...

ಹೀಗೆ ಒಲೆ ಹಚ್ಚಲು ಸೌದೆ

ಶುಚಿಗೊಳಿಸಲು ನಾರಾಗುತ್ತದೆ.

ಹೀಗೆ ದಿನನಿತ್ಯದ ಅತ್ಯಮೂಲ್ಯ ವಸ್ತುಗಳ ಪೂರೈಸುವ ಕಲ್ಪವೃಕ್ಷಕ್ಕೆ ರಾಯರನ್ನು ಹೋಲಿಸುತ್ತಾರೆ ಏಕೆಂದರೆ ಬೇಡಿದ್ದನ್ನು ಬೇಡುವ ಮುನ್ನ ನೀಡುವರೆಂದು ..

ಇನ್ನು ಶ್ರೀ ರಾಯರನ್ನು ಕಾಮಧೇನುವಿಗೆ  ಹೋಲಿಸುತ್ತಾರೆ ಕಾರಣ.

ಹಸುವಿನಂತಹ ಮನವುಳ್ಳವರು ಶ್ರೀ ರಾಯರು, ಹಾಲಿನಂತ ಪರಿಶುದ್ಧ ಮನಸ್ಸು ಶ್ರೀರಾಯರದು ಎಂಬ ವಿಚಾರ. ಹಾಗೂ ಹಸುವಿನ ಪ್ರತಿ ಅಂಶವೂ ಶ್ರೇಷ್ಠವಾದ ಕಾರಣ ಅದೇ ರೀತಿ ನಮ್ಮ ರಾಯರು ಎಂದು ಹಿರಿಯರು ವರ್ಣಿಸುತ್ತಾರೆ.

ಮಂತ್ರ + ಆಲಯ = ಮಂತ್ರಾಲಯ

ಮಂತ್ರ + ಅಕ್ಷತೆ = ಮಂತ್ರಾಕ್ಷತೆ

ಮಂತ್ರಾಲದ ಮೊದಲ ಹೆಸರು "ಮಂಚಾಲಯ" 

ಮಂಚಾಲಮ್ಮ ಎಂಬ ಲಿಂಗವಂತೆ(ಇಷ್ಟಲಿಂಗಾರಾಧಕೆ)ಯ ಸ್ಥಳವದು...

ಶ್ರೀಗಳು ಅದು ಶ್ರೀರಾಮ ತಂಗಿದ್ದು ವಿಶ್ರಮಿಸಿಹೋದ ಪವಿತ್ರಭೂಮಿ ಎಂದು ಮಂಚಾಲಮ್ಮ ಅವರಿಂದ ಸ್ಥಳ ಪಡೆಯುತ್ತಾರೆ..

ಆ ಕಾರಣ ಇಂದಿಗೂ ಶ್ರೀರಾಯರನ್ನು ದರ್ಶನ ಮಾಡುವ ಮೊದಲು ಮಂಚಾಲಮ್ಮನ ದರ್ಶನ ಪಡೆಯಬೇಕೆಂಬ ಪ್ರತೀತಿ(ಪದ್ದತಿ) ಇದೆ. 

ಮಂಚಾಲಯ ಎಂಬ ಪದ ದಿನ ಕಳೆದಂತೆ ಮಂತ್ರಾಲಯವಾಯ್ತು..

ಇನ್ನು ಬಿಚ್ಚಾಲೆ ಸ್ಥಳ ಪುರಾಣ ನೋಡೋದಾದ್ರೆ

ಇನ್ನು ಬಿಚ್ಚಾಲೆ( ಭಿಕ್ಷಾಲ)ಯ ಮಹತ್ವವನ್ನು ನೋಡುವುದಾದರೆ:-

ಶ್ರೀಗಳ ಆರಾಧನೆಗೆ ಬರುತ್ತಿದ್ದ ಶಿಷ್ಯನಿಗೆ ಪ್ರತಿನಿತ್ಯ ತಾನಿದ್ದ ಸ್ಥಳದಿಂದ ಬಂದು ಹೋಗಲು ಬಹಳ ದೂರವಾದುದರಿಂದ ಹಾಗೂ ಅಷ್ಟು ಶಕ್ತಿ ಆತನಲ್ಲಿರದ ಕಾರಣ ಶ್ರೀರಾಯರು ತಪಸ್ಸು ಮಾಡಿದ ಸ್ಥಳದಲ್ಲೇ ತಮ್ಮ ಇರುವಿಕೆ ಪ್ರದರ್ಶಿಸಿ ಇಂದು ವಿಶ್ವದ ಏಕೈಕ ಮೊದಲ ಏಕ ಶಿಲಾ ಬೃಂಧಾವನವೆಂದು ಕರೆಯಿಸಿಕೊಳ್ಳುವ ಸ್ಥಳದಲ್ಲಿ ನೆಲೆಗೊಂಜಿರುತ್ತಾರೆ. ಇಂದಿನ ದಿನಗಳಲ್ಲಿ ಬಿಚ್ಚಾಲೆ(ಬಿಚ್ಚಾಲಯ) ಸ್ಥಳಕ್ಕೂ ಹೆಚ್ಚೆಚ್ಚು ಭಕ್ತ ಸಮೂಹ ಹರಿದು ಬರುತ್ತಿದೆ.

ಕೃಪೆ :- ಮಂತ್ರಾಲಯ ಕ್ಷೇತ್ರ

ಅಪ್ಪಣ್ಣಚಾರ್ಯರು ಶ್ರೀ ರಾಯರಿಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವರು ಆದರೆ ಶ್ರೀಗಳ ಶಿಷ್ಯರಾಗುತ್ತಾರೆ. ಕಾರಣ ಶ್ರೀ ರಾಯರಲ್ಲಿದ್ದ ಜ್ಞಾನ ಶಕ್ತಿ. ಶ್ರೀರಾಯರು ಅಪ್ಪಣ್ಣಾಚಾರ್ಯರ  ಮನೆಯಲ್ಲಿ ವಾಸವಿರ್ತಾರೆ ಅಂತ ಹೇಳ್ತಾರೆ. ಹಾಗೆ ವಾಸವಿದ್ದಾಗ ಮಲಗಿದ ಸ್ಥಳವು ಇಂದು ಎಲ್ಲಾ ಭಕ್ತರನ್ನು ಕೈಬೀಸಿ ಕರೆಯುತ್ತಿದೆ..

ಮಂತ್ರಾಲಯಕ್ಕೆ ಹೋದವರು ಬಿಚ್ಚಾಲೆ , ಅಪ್ಪಣ್ಣಾಚಾರ್ಯರ ಮನೆ ಹಾಗೂ ಪಂಚಮುಖಿ ತಾಣಗಳಿಗೆ ಭೇಟಿ ನೀಡಿ ಬರುತ್ತಾರೆ...

ಶ್ರೀರಾಯರು ತಮ್ಮನ್ನು ನಂಬಿ ಬರುವ ಭಕ್ತರ ಪೊರೆದು ಪಾಲಿಸುವ ಮಹಾ ದೀವಿಗೆಯಾಗಿ ಜಗತ್ತಿಗೇ ಬೆಳಕನ್ನು ನೀಡುತ್ತಿದ್ದಾರೆ...

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ..

ಭಜತಾಂ ಕಲ್ಪವೃಕ್ಷಾಯ ನಮಕಾಂ ಕಾಮಧೇನವೇ...

- ರುದ್ರೇಶ್ ಪಿ ವಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ